ವಿಧಾನಸಭೆ ಚುನಾವಣೆಗೂ ಮುನ್ನವೇ ಮಹದಾಯಿ ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಿದ್ದು.. ಅದರ ಯೋಜನೆಯ ಸ್ವರೂಪ ಬದಲಿಸಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಕಳೆದ ಚುನಾವಣೆ ವೇಳೆ ಮಹಾದಾಯಿ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಬಿಜೆಪಿ ನಾಯಕರು ಭರವಸೆಕೊಟ್ಟಿದ್ದರು.. ಆದರೆ ಸರ್ಕಾರ ಬಂದು 3 ವರ್ಷಗಳಾದರೂ ಇನ್ನೂ ಯಾವುದೇ ಪ್ರಗತಿ ಆಗಿಲ್ಲ. ಇದು ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂಬ ಭೀತಿ ಬಿಜೆಪಿ ಪಾಳಯದಲ್ಲಿ ಇದೆ. ಹೀಗಾಗಿ ಯೋಜನೆಗೆ ಬಾಕಿ ಇರುವ ಅನುಮತಿಗಳನ್ನು ನೀಡುವಂತೆ ಸಿಎಂ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ, ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ. ಇನ್ನು ಯೋಜನೆಗೆ ಗೋವಾ ತಕರಾರು ತೆಗೆಯಲಿದೆ. ಆದ್ರೆ, ಅಲ್ಲಿಯೂ ಬಿಜೆಪಿ ಸರ್ಕಾರವೇ ಇರುವುದರಿಂದ ಸೌಹಾರ್ದಯುತವಾಗಿ ಬಗೆಹರಿಸುವ ವಿಶ್ವಾಸದಲ್ಲಿ ಬಿಜೆಪಿ ಸರ್ಕಾರ ಇದೆ. ಈ ಯೋಜನೆಯಿಂದ ಹುಬ್ಬಳ್ಳಿ-ಧಾರವಾಡ, ಗದಗ ಸುತ್ತಲಿನ ಪಟ್ಟಣ, ಗ್ರಾಮಗಳಿಗೆ ನೀರು ಒದಗಿಸುವ ಗುರಿ ಹೊಂದಿದೆ.
#publictv #newscafe #hrranganath